Monday 1 November 2010

ಎಲ್ಲ ಕನ್ನಡಿಗರಿಗೆ ಹಾಗು ಕನ್ನಡ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಗೆಳೆಯರೇ, ಇವತ್ತು ನಾನು ಕನ್ನಡದಲ್ಲಿ ಬರೆಯುತ್ತ ಇದ್ದೇನೆ. ನಾನು ಈ ಪುಸ್ತಕಗಳಲ್ಲಿ ಇರುವ ಕನ್ನಡದಲ್ಲಿ ಬರೆಯುದಿಲ್ಲ. ಆಡುಭಾಷೆಯಲ್ಲಿ ಬರಿತೇನೆ. ಬರೆಯುವಾಗ ಅದು ಎಷ್ಟು ತಪ್ಪು ಮಾಡ್ತೇನೋ ಗೊತ್ತಿಲ್ಲ. ಯಾಕಂದ್ರೆ ನಾನು ಕಲಿತಿದ್ದು ಕ್ರೈಸ್ತ ಸಂಸ್ತೆಯಲ್ಲಿ. ಕ್ರೈಸ್ತ ಸಂಸ್ತೆ ಅಂದ್ರೆ ಅದು ಒಂದ್ತರ ಕನ್ನಡದ ಮರುಭೂಮಿ ಇದ್ದಹಾಗೆ. ಎಂತಹ ದುರಂತ, ಎಂತಹ ವಿಪರಿಯಾಸ ಅಂದ್ರೆ ಕನ್ನಡದ spelling ಕೇಳುವವರವರು. ನನ್ನ ಮಾತೃಭಾಷೆ ಕನ್ನಡ, ಅದಕ್ಕೆ ನನಗೆ ಅಲ್ಲಿ ಅಷ್ಟು ತೊಂದರೆ ಆಗ್ಲಿಲ್ಲ.

ನಾನು ನನ್ನ ಪ್ರೌಡಶಾಲೆಗಾಗಿ ಆ ಕ್ರೈಸ್ತ ಸಂಸ್ತೆ ಬಿಟ್ಟು ಬೇರೆ ಶಾಲೆ ಸೇರಬೇಕಾಯ್ತು, ಪ್ರೌಡಶಾಲೆಯಲ್ಲಿ ಕನ್ನಡ ನನ್ನ ತೃತೀಯ ಭಾಷೆ. ಇಲ್ಲಿ ನಮಗೆ ಕನ್ನಡ ಪಾಠ ಮಾಡಿದವರು ಅದೃಶಪ್ಪ ವಂಟಿಗಿಟ್ಟಿ. ನಾವು ಅವರಿಗೆ ಗುಟ್ಟಿ ಅಂಥ ಹೆಸರಿಟ್ಟಿದ್ವಿ. ನಮ್ಮ ಶಿಕ್ಷಕರ ಬಗ್ಗೆ ನಾವು ಹಾಗೆ ಹೇಳಬಾರದು, ಆದರು ನಿಜ ಹೇಳ್ಬೇಕಂದ್ರೆ ನನ್ನಲ್ಲಿ ಇರೋ ಅಲ್ಪ-ಸ್ವಲ್ಪ ಕನ್ನಡವನ್ನ ಅದೃಶ್ಯ ಮಾಡಿದವರು ಅವರೇ. ಅವರ ಪರೀಕ್ಷೆಯನ್ನ ನನಗೆ ೯/೨೫ ಅಂಕಗಳು ಬರ್ತಿದ್ವು. ಇವರು ವೇಗವಾಗಿ ಪ್ರಶ್ನೆ-ಉತ್ತರಗಳನ್ನ ಬರಿಸ್ತಿದ್ರು, ನನಗೆ ಅಷ್ಟು ವೇಗವಾಗಿ ಬರಿಯೋಕೆ ಆಗ್ತಿರ್ಲಿಲ್ಲ. ಉದಾಹರಣೆ ನೋಡಿ, "ಸಿಂಹದ ಗುಹೆ" ಬರೆಯಲು "ಸಂಹದ ಗುಹೆ" ಅಂಥ ಬರೆದವನು ನಾನು. ನಂತರ ನಮಗೆ ಕನ್ನಡ ಹೇಳ್ಕೊಟ್ಟವರು S.M.ಹೆಗ್ಡೆsir. ಈ ಶಿಕ್ಷಕರಂದ್ರೆ ಇಡೀ ಶಾಲೆಗೇ ಗೌರವ. ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ರು. ಇವರಿಂದಾಗಿ ನನ್ನ ಕನ್ನಡ ಸ್ವಲ್ಪ ಸುದಾರಣೆ ಕಾಣಲಾರಂಭಿರಿಸಿತು. ನಮ್ಮ ತಂದೆ ಕೂಡ ನನಗೆ ಕನ್ನಡ ಹೇಳ್ಕೊಟ್ರು. ನಮ್ಮ ತಂದೆ ಕನ್ನಡ ಸ್ನಾತಕೋತ್ತರ ಪದವಿದರರು. ಆದ್ರೆ ಅದೇನೋ "ಹಿತ್ತಲ ಗಿಡ ಮಧ್ಧಲ್ಲ" ಅಂತಾರಲ್ಲ, ನನಗೆ ಅವರಿಗಿಂತ ನಮ್ಮ S.M.ಹೆಗ್ಡೆsir ಪಾಠ ಇಷ್ಟ.

ಪದವಿ-ಪೂರ್ವ ಕಾಲೇಜಿನಲ್ಲಿ ನಾನು ಕನ್ನಡ ಆಯ್ಕೆ ಮಾಡಿರಲಿಲ್ಲ. ಸಂಸ್ಕೃತ ಆಯ್ಕೆ ಮಾಡಿದ್ದೆ. ಸಂಸ್ಕೃತ ಆಯ್ಕೆ ಮಾಡಿದ್ರೂ ನನ್ನ ಕನ್ನಡ ಬಹಳ ಸುದಾರಣೆ ಕಂಡಿತು. ಕನ್ನಡ ದಿನಪತ್ರಿಕೆ ಓದಲು ಆರಂಭಿಸಿದೆ. ಪುಸ್ತಕಗಳನ್ನ ಓದಿದೆ. ಕವನಗಳನ್ನ ಓದಿದೆ. ಯಾವುದೇ ಕನ್ನಡ ಚಲನಚಿತ್ರ ಹಾಡನ್ನ ಕೇಳಿದ್ರೆ ಅದರ ಒಳಾರ್ಥವನ್ನ ತಿಳಿಯಲಾರಂಭಿಸಿದೆ. ಅದರಿಂದಾಗಿ ಕನ್ನಡ ಸಾಹಿತ್ಯ ಜ್ಞಾನ ಬೆಳೆಯಿತು.

ನೋಡಿ ಈಗ ನನ್ನ ಕನ್ನಡ ಹೀಗಿದೆ. ನನ್ನ ಕನ್ನಡ ಚೆನ್ನಾಗಿಲ್ಲ ಅನ್ಸಿದ್ರೆ, ಇಗಲೇ ಹೀಗೆ, ಹಿಂದೆ ಹೇಗೋ ಅಂಥ ಯೋಚಿಸಿ.

4 comments:

Anonymous said...

bahala olleya abhipraaya... bahala olleya lekhana..

Unknown said...

ಎಷ್ಟೋ ಜನ ಕನ್ನಡ ಲಿಪಿ ಓದೋದು ಅಂದ್ರೆ 'its a big headache' ಅಂತ ಹೇಳ್ತಾರೆ. ಅದಕ್ಕೆ ರಾಜ್ಯೋತ್ಸವದಂದು ನಾನು ಕನ್ನಡ ಕಲಿತ ರೀತಿ ಹೇಗೆ ಅಂತ ಬರೆದಿದ್ದೇನೆ ಅಷ್ಟೇ. ಇದು ಯಾವ ಲೇಖನ ಅಲ್ಲ. ಇದು ನನ್ನ ಕನ್ನಡ ಅಭಿಮಾನ, ಪ್ರೀತಿ, ಗೌರವ.

krishna said...

nimma goeravakke, preethige nannadondu namana...

-------- preethi inda kavijeevi..

manadalli belagali kannadada jyothi, usiralli chimmali kannadada preethi..! ella bhaasheyannu preethisi, kannada nudiyannu poojisi..!!

Unknown said...

@ಕೃಷ್ಣ ಕವನದ ೩ನೆ ಸಾಲು ತುಂಬಾ ಇಷ್ಟವಾಯ್ತು